ಡೋಲು ಮತ್ತು ನಾದಸ್ವರ ಸಂಗೀತ ತರಬೇತಿಗಾಗಿ ಅರ್ಜಿ ಆಹ್ವಾನ*

0
44
Share this Article
0
(0)
Views: 0

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 05:

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಮೂಲಕ ದೇವನಹಳ್ಳಿ ಟೌನ್/ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸವಿತಾ ಸಮಾಜದ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ತರಬೇತಿ ಕೇಂದ್ರಕ್ಕೆ 2024-25ನೇ ಸಾಲಿಗೆ ಡೋಲು-10 ಮತ್ತು ನಾದಸ್ವರ-03 ಒಟ್ಟು 13 ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರವೇಶ ಪಡೆಯಲು ಹಿಂದುಳಿದ ವರ್ಗಗಳ ಪ್ರವರ್ಗ-2(ಎ)ರಲ್ಲಿ ಬರುವ ಸವಿತಾ ಸಮಾಜ ಹಾಗೂ ಅದರ ಉಪಜಾತಿಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 13 ಸಂಜೆ 5.00 ಗಂಟೆಯವರೆಗೆ ಕಾಲಾವಕಾಶ ನಿಗಧಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಅರ್ಹತೆಗಳು

ಹಿಂದುಳಿದ ವರ್ಗಗಳ ಪ್ರವರ್ಗ-2(ಎ)ರಲ್ಲಿ ಬರುವ ಸವಿತಾ ಸಮಾಜ ಅಥವಾ ಅದರ ಉಪಜಾತಿಗಳಿಗೆ ಸೇರಿರಬೇಕು. ಕನಿಷ್ಠ ವಯೋಮಿತಿ 10 ವರ್ಷ ಹಾಗೂ ಗರಿಷ್ಠ ವಯೋಮಿತಿ 15 ವರ್ಷ (ಒಂದು ವೇಳೆ ಅಧ್ಯಯನ ಮಾಡುತ್ತಿರುವ 15 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳು ದೊರೆಯದ ಪಕ್ಷದಲ್ಲಿ ಮಾತ್ರ 18 ವರ್ಷದವರೆಗಿನ ಮಕ್ಕಳನ್ನು ಸ್ವಲ್ಪಮಟ್ಟಿಗೆ ಸೇರಿಸಲು ಅವಕಾಶ ನೀಡುವುದು). ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. 2.00 ಲಕ್ಷಗಳು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080 27682059 (ಸಮಯ ಬೆಳಿಗ್ಗೆ 10.00 ರಿಂದ ಸಂಜೆ 5.30ರವರೆಗೆ, ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ) ಸಂಪರ್ಕಿಸಬಹುದಾಗಿದೆ.

ಅರ್ಜಿ ಪಡೆಯಲು ಹಾಗೂ ಹೆಚ್ಚಿನ ವಿವರಗಳಿಗಾಗಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಮಿನಿ ವಿಧಾನಸೌಧದ ಹಿಂಭಾಗ, ಡಿವಿಎಂ ಕಾಲೋನಿ, ದೇವನಹಳ್ಳಿ ಟೌನ್ / ತಾಲ್ಲೂಕು ಇಲ್ಲಿ ಸಂಪರ್ಕಿಸಬಹುದು‌ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here