ಬಯಲು ಸೀಮೆಯ ಜಿಲ್ಲೆಗಳಾದ ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶೀಘ್ರದಲ್ಲಿ ನೀರನ್ನು ಹರಿಸಬೇಕು ಸಚಿವ: ಮುನಿಯಪ್ಪ

0
20
Share this Article
0
(0)
Views: 0

 ಈ ಯೋಜನೆಯ ಮೂಲಕ ಕುಡಿಯುವ ನೀರು ನಮ್ಮ ಭಾಗಕ್ಕೆ ಶತಾಯಗತಾಯ ಹರಿಸುತ್ತಾರೆ ಎಂಬ ಆಶಾಭಾವನೆಯನ್ನು ಹೊಂದಿದ್ದೇನೆ ಸಚಿವ:ಕೆಹೆಚ್. ಮುನಿಯಪ್ಪ

ಸಕಲೇಶಪುರ.6(ಹೆಬ್ಬನಹಳ್ಳಿ)

ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ *ಕೆಹೆಚ್. ಮುನಿಯಪ್ಪನವರು* ಇಂದು ಎತ್ತಿನಹೊಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇವತ್ತಿನ ಕಾರ್ಯಕ್ರಮ ಪಶ್ಚಿಮ ದಿಂದ ಪೂರ್ವಕ್ಕೆ ನೀರನ್ನು ಹರಿಸುವ ಒಂದು ಮಹತ್ತರ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ರವರು ಚಾಲನೆ ನೀಡಿರುವುದು ಒಂದು ಸಂತಸಕರ ವಿಷವಾಗಿದೆ.

ಅದರಲ್ಲಿ ವಿಶೇಷವಾಗಿ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ರವರು ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿ 14 ತಿಂಗಳಲ್ಲಿ ಬಯಲು ಸೀಮೆಯ ಭಾಗದ ಜಿಲ್ಲೆಗಳಾದ ಬೆಂಗಳೂರು ನಗರದ, ಚಿಕ್ಕಬಳ್ಳಾಪುರ, ಕೋಲಾರ ಭಾಗಕ್ಕೆ ನೀರನ್ನು ಹರಿಸಲು ಮುಂದಾಗುತ್ತಾರೆ ಎಂಬ ಆಶಾಭಾವನೆಯನ್ನು ಹೊಂದಿದ್ದಾರೆ ಎಂದರು.

ಸಚಿವರಾದ ಎಂಸಿ ಸುಧಾಕರ್,ಕೃಷ್ಣ ಬೈರೇಗೌಡ, ನಾನೂ ಈ ಯೋಜನೆಯನ್ನು ನಮ್ಮ ಬಯಲು ಸೀಮೆಯ ಜಿಲ್ಲೆಗಳಿಗೆ ಮಾನ್ಯ ವೀರಪ್ಪ ಮೊಯಲಿ ರವರ ನೇತೃತ್ವದಲ್ಲಿ ಹೋರಾಟ ಮಾಡಿದ್ದೀವಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ನಮ್ಮ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಕಲ್ಪಿಸಬೇಕು ಎಂದು ಅವರಲ್ಲಿ ಒತ್ತಾಯ ಮಾಡುತ್ತೇನೆ 

ನಮ್ಮ ಬಯಲು ಸೀಮೆ ಭಾಗದ ಜನರಿಗೆ ಬೋರ್ವೆಲ್ ಮೂಲಕ 1000 ಅಡಿ ಕೊರಿಸಿದರೂ ನಮಗೆ ನೀರು ಸಿಗಲ್ಲಾ ಸಿಕ್ಕಿದರೂ ಅದು ಫ್ಲೋರೈಡ್ ನಿಂದ ಕೂಡಿದ್ದು ಅದು ಕುಡಿಯಲು ಯೋಗ್ಯವಾಗಿರುವುದಲ್ಲ ಆದ ಕಾರಣ ತಾವು ಈ ಯೋಜನೆಯ ಮೂಲಕ ನಮ್ಮ ಬಯಲು ಸೀಮೆ ಜಿಲ್ಲೆಗಳಾದ ಕೋಲಾರ ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಹರಿಸುವ ಕಾರ್ಯ ಶೀಘ್ರದಲ್ಲಿ ಮುಂದುವರಿಸಬೇಕು ಎಂದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯಲಿ, ಸಚಿವರಾದ ಪರಮೇಶ್ವರ್ ,ಬೈರತಿ ಸುರೇಶ್, ರಾಜಣ್ಣ, ಎಂಬಿ ಪಾಟೀಲ್, ಹಾಗೂ ಶಾಸಕರು ,ಅಧಿಕಾರಿಗಳು ಉಪಸ್ಥಿತರಿದ್ದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.