ಬಹುಕಾರ್ಯಕ ತಾಂತ್ರಿಕೇತರ ಸಿಬ್ಬಂದಿ ಮತ್ತು ಹವಾಲ್ದಾರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

0
45
Share this Article
0
(0)
Views: 1

ಬೆಂಗಳೂರು, ಜುಲೈ 05 

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಬಹುಕಾರ್ಯಕ ತಾಂತ್ರಿಕೇತರ ಸಿಬ್ಬಂದಿ ಮತ್ತು ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

  ಅರ್ಜಿ ಸಲ್ಲಿಸುವವರ ವಿದ್ಯಾರ್ಹತೆ ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯಲೇಶನ್ ಪರೀಕ್ಷೆ, ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವುದು. ಯಾವುದೇ ರೀತಿಯ ಸಂದರ್ಶನ ಇರುವುದಿಲ್ಲ. ಅರ್ಜಿಯನ್ನು https://ssc.gov.in ಲಿಂಕ್‍ನಲ್ಲಿ ಜುಲೈ 31 ರೊಳಗೆ ಸಲ್ಲಿಸಬೇಕು.

  ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 080-25502520 ನ್ನು ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಂಪರ್ಕಿಸಬಹುದು. ಅಥವಾ ಎಸ್‍ಎಸ್‍ಸಿ ಮುಖ್ಯ ಕಚೇರಿ ನವದೆಹಲಿಯ ವೆಬ್‍ಸೈಟ್ https://ssc.gov.in ಮತ್ತು ಎಸ್‍ಎಸ್‍ಸಿ ಸ್ಥಳೀಯ ಕಚೇರಿ ಬೆಂಗಳೂರಿನ (ಕರ್ನಾಟಕ – ಕೇರಳ, ಲಕ್ಷ ದ್ವೀಪ ಪ್ರದೇಶದ ಪರೀಕ್ಷಾ ಕೇಂದ್ರಗಳು) ವೆಬ್‍ಸೈಟ್ www.ssckkr.kar.nic.in ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here