ಬಾಲ ಭವನ ಸೊಸೈಟಿಯು 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ “ಸ್ವಾತಂತ್ರ್ಯ ಸಂಭ್ರಮ”ವನ್ನು ಆಯೋಜಿಸಿದ್ದು, 05 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಆಗಸ್ಟ್ 15 ರಂದು ಬೆಳಿಗ್ಗೆ 10 ಗಂಟೆಗೆ ಚಿತ್ರಕಲೆ, ವೇಷಭೂಷಣ, ಕಿರುನಾಟಕ ಸ್ಫರ್ಧೆಗಳನ್ನು ಬೆಂಗಳೂರು ಕಬ್ಬನ್ ಉದ್ಯಾನವನದಲ್ಲಿರುವ ಬಾಲ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವ ಮಕ್ಕಳು ಆಗಸ್ಟ್ 10 ರಿಂದ ವಿವರಗಳನ್ನು ಕಚೇರಿ ವೇಳೆಯಲ್ಲಿ (ತಿಂಗಳ ಪ್ರತಿ ಸೋಮವಾರ ಹಾಗೂ ಎರಡನೇ ಮಂಗಳವಾರದ ರಜಾ ದಿನಗಳನ್ನು ಹೊರತುಪಡಿಸಿ) ಬಾಲಭವನ ಸೊಸೈಟಿ, ಕಬ್ಬನ್ ಪಾರ್ಕ್ , ಇಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ : 080-22864189 ಅಥವಾ E-mail:jbalbhavan@gmail.com ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.