ಧಾರವಾಡ ಜೂನ್.10:
ಜೂನ್ 09, 2024 ರಂದು ಬೆಳಿಗ್ಗೆ 09.30 ಗಂಟೆಗೆ ಧಾರವಾಡ ಜಿಲ್ಲಾ ಪೊಲೀಸ್, ಜಿಲ್ಲಾ ಸತ್ರ ನ್ಯಾಯಾಲಯ ಧಾರವಾಡ ಹಾಗೂ ಕಂದಾಯ ಇಲಾಖೆ ಧಾರವಾಡ, ಹುರುಕಡ್ಲಿ ಅಜ್ಜ ಕಾನೂನು ಮಹಾ ವಿದ್ಯಾಲಯ ಧಾರವಾಡ ಇವರ ಸಹಯೋಗದಲ್ಲಿ ಧಾರವಾಡದ ಕರ್ನಾಟಕ ಕಾಲೇಜ್ ಆವರಣದಲ್ಲಿರುವ ಸೃಜನ ರಂಗಮಂದಿರದಲ್ಲಿ 03 ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರು ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲರಾದ ಮಲ್ಲಿಕಾರ್ಜುನ ಆರ್.ಎಂ, ಬೆಂಗಳೂರು ಕೆಎಲ್‍ಇ ಲಾ ಕಾಲೇಜ್ ಪ್ರೋಪೆಸರ್ ಡಾ. ಎಸ್.ಜಿ.ಗೌಡಪ್ಪಗೌಡರ್, ಹಾಗೂ ಬೆಂಗಳೂರು ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲರಾದ ಮಧುಸೂದನ್ ಇವರು 03 ಹೊಸ ಕಾನೂನುಗಳ ವಿಷಯದ ಬಗ್ಗೆ ಮಂಡಿಸಿದರು.
ಕಾರ್ಯಗಾರವನ್ನು ಪ್ರಿನ್ಸಿಪಲ್ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಕೆ.ಜಿ.ಶಾಂತಿ ಅವರು ಉದ್ಘಾಟನೆ ಮಾಡಿದರು. ಕಾರ್ಯಗಾರದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲರು ಮಲ್ಲಿಕಾರ್ಜುನ ಆರ್.ಎಂ, ಕೆ.ಎಲ್.ಇ ಲಾ ಕಾಲೇಜ್‍ನ ಪ್ರೋಪೆಸರ್ ಡಾ. ಎಸ್.ಜಿ.ಗೌಡಪ್ಪಗೌಡರ್ ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲ ಮಧುಸೂದನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿ.ಬರಮನಿ, ಪ್ರಾಂಶುಪಾಲ ಎಂ. ಎಂ. ಯಾದವಾಡ. ಹಾಗೂ ಪಿಟಿಎಸ್‍ನ ಅಧಿಕಾರಿ ಹಾಗೂ ಸಿಬ್ಬಂದಿಯವರು, ಆಂತರಿಕ ಭದ್ರತಾ ವಿಭಾಗದ ಅಧಿಕಾರಿ, ರಾಜ್ಯ ಗುಪ್ತವಾರ್ತೆ ಅಧಿಕಾರಿ, ಲೋಕಾಯುಕ್ತ ಇಲಾಖೆಯ ಅಧಿಕಾರಿ, ಜಿಲ್ಲೆಯ ತಹಶೀಲ್ದಾರ ಹಂತದ ಅಧಿಕಾರಿಗಳು ಹಾಗೂ ಕರ್ನಾಟಕ ಕಾಲೇಜಿನ ಕಲಾ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಹುರುಕಡ್ಲಿ ಅಜ್ಜ ಕಾನೂನು ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.