ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್. 07
ಮೈಸೂರಿನ ಅರಮನೆ ಮೈದಾನದಲ್ಲಿ ದಸರಾ ಉತ್ಸವ ಅಂಗವಾಗಿ ಅಕ್ಟೋಬರ್ 03 ರಿಂದ ಅಕ್ಟೋಬರ್ 06 ರ ವರೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ‘ರಾಜ್ಯ ಮಟ್ಟದ ದಸರಾ ಸಿಎಂ ಕಪ್-2024ರ ಕ್ರೀಡಾಕೂಟ’ದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಿ ಹ್ಯಾಂಡ್ ಬಾಲ್ ಮತ್ತು ನೆಟ್ ಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಜಿಲ್ಲೆಯ ಪುರುಷರ ವಿಭಾಗದ ನೆಟ್ಬಾಲ್ ಕ್ರೀಡೆಯಲ್ಲಿ ಪವನ್ ಕುಮಾರ್ ತಂಡವು ಪ್ರಥಮ ಸ್ಥಾನ, ಹ್ಯಾಂಡ್ ಬಾಲ್ ಪುರುಷರ ವಿಭಾಗದಲ್ಲಿ ಸುನಿಲ್ ಹಾಗೂ ತಂಡವು ಪ್ರಥಮ ಸ್ಥಾನ ಮತ್ತು ಹಾಕಿ ಮಹಿಳಾ ವಿಭಾಗದಲ್ಲಿ ಮುನಿರತ್ನಮ್ಮ ತಂಡವು ದ್ವೀತಿಯ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿ ವಿಜೇತ ತಂಡಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಅಭಿನಂದನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿ ಅವರು ತಿಳಿಸಿದ್ದಾರೆ.