ಜಿಲ್ಲೆಯಲ್ಲಿ ‘ಹಮಾರೆ ಬಾರಾಹ್’ ಚಿತ್ರ ಪ್ರದರ್ಶನ ನಿಷೇಧಿಸಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ
ಬಳ್ಳಾರಿ,ಜೂ.12:
ಮುಸ್ಲಿಂ ಸಮುದಾಯಗಳಿಗೆ ಧಕ್ಕೆ ತರುವಂತಹ ಅಂಶಗಳನ್ನೊಳಗೊಂಡಿರುವ ‘ಹಮಾರೆ ಬಾರಾಹ್’ ಚಲನಚಿತ್ರವನ್ನು ಕರ್ನಾಟಕ ಸಿನಿಮಾ (ರೆಗ್ಯೂಲೇಶನ್) ಆಕ್ಟ್ – 1964ರ ಸೆಕ್ಷನ್ -15(1) ಮತ್ತು 15(5) ರ ಅಡಿ ಚಲನಚಿತ್ರದ ಟ್ರೈಲರ್ ಹಾಗೂ ಚಲನಚಿತ್ರವನ್ನು ಎರಡು ವಾರಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಬಳ್ಳಾರಿ ಜಿಲ್ಲೆಯ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನಿಮಾ ಮಂದಿರಗಳು, ಖಾಸಗಿ ಟಿವಿ ಚಾನೆಲ್‍ಗಳು ಮತ್ತು ಇತರೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.