ಈ ಘಟಕದಿಂದ ಸುಮಾರು 24 ಟಿಎಂಸಿ ನೀರು ಸರಬರಾಜು ಘಟಕ
ಬಯಲು ಪ್ರದೇಶಗಳಾದ ಕೋಲಾರ,ಚಿಕ್ಕಬಳ್ಳಾಪುರ,ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಪ್ರಮುಖ ಯೋಜನೆ
ಸಕಲೇಶಪುರ. 6
ಅಳುವಳ್ಳಿ ಯಲ್ಲಿಂದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪನವರು ಎತ್ತಿನಹೊಳೆ ಯೋಜನೆಯ ನೀರನ್ನು ಲಿಪ್ಟ್ ಮಾಡುವ ಪಂಪ್ ಹೌಸ್ ನ ವಿ ಆರ್ 8 ಘಟಕದ ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು.
ಎತ್ತಿನಹೊಳೆ ಹೋರಾಟದ ಫಲ ಇಂದು ಒಂದು ಹಂತಕ್ಕೆ ಬಂದಿರುವುದು ಸಂತಸವಾಗಿದೆ ವೀರಪ್ಪ ಮೋಯಲಿ ನಾನು ಸಂಸದರಾಗಿದ್ದಾಗ 10 ವರ್ಷಗಳ ಸುದೀರ್ಘವಾದ ಹೋರಾಟದ ಫಲ ಇಂದು ಸಾದ್ಯವಾಗಿದೆ. ಪರಮಶಿವಯ್ಯ ರವರು ಸುಮಾರು 500 TMC ನೀರನ್ನು ಬಯಲು ಸೀಮೆಗೆ ಕೊಡಿಸಲು ಹೋರಾಟ ಮಾಡಿದ್ದರು
ಅಂದಿನ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ರವರು ನೇತೃತ್ವದಲ್ಲಿ ನಡದ ಈ ಯೋಜನೆ ಬಹಳ ಮುಖ್ಯವಾಗಿ ಬಯಲು ಸೀಮೆ ಪ್ರದೇಶಗಳಾದ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಅನುಕೂಲ ವಾಗಿದೆ ಇದು ಹಂತ ಹಂತವಾಗಿ ನೀರನ್ನು ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿಕೆ ಶಿವಕುಮಾರ್ ರವರಿಗೆ , ಎಲ್ಲಾ ಇಂಜಿನಿಯರ್ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.