ಬಿಬಿಎಂಪಿ ಅರಣ್ಯ ವಿಭಾಗದ ವತಿಯಿಂದ 2024-25ನೇ ಸಾಲಿನಲ್ಲಿ ಕೆರೆಗಳು, ಉದ್ಯಾನವನಗಳು ಹಾಗೂ ಇತರೆ ಪ್ರದೇಶಗಳಲ್ಲಿ *7 ದಿನಗಳ ಕಾಲ 19,850 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.*
ಪ್ರತಿ ವರ್ಷದಂತೆ ಈ ವರ್ಷವೂ ಸಹ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, *6ನೇ ಆಗಸ್ಟ್ 2024 ರಿಂದ 12ನೇ ಆಗಸ್ಟ್ 2024ರವರೆಗೆ* ಕೆರೆಗಳು, ಉದ್ಯಾನವನಗಳು ಹಾಗೂ ಇತರೆ ಪ್ರದೇಶಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಿಬಿಎಂಪಿ ಅರಣ್ಯ ಘಟಕದ ವತಿಯಿಂದ ಸಸಿಗಳು, ವೃಕ್ಷ ಕವಚಗಳನ್ನು ಒದಗಿಸಿ ಗಿಡ ನೆಡಲು ವ್ಯವಸ್ಥೆ ಮಾಡಲಾಗುತ್ತದೆ. ಸಾರ್ವಜನಿಕರು ಮಕ್ಕಳ ಜೊತೆಗೂಡಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಸರ ಕಾಳಜಿಯನ್ನು ಉತ್ತೇಜಿಸಲು ಕೋರಿದೆ.
ಹಸಿರು ರಕ್ಷಕ ತಂತ್ರಾಂಶದ ಮೂಲಕ ನೊಂದಾಯಿಸಿಕೊಂಡು ಗಿಡಗಳ ಪೋಷಣೆಗೆ ನಿರಂತರವಾಗಿ ಪಾಲ್ಗೊಳ್ಳಬಹುದಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಬಿ.ಎಲ್‌ಜಿ ಸ್ವಾಮಿ ರವರು ಕೋರಿರುತ್ತಾರೆ.
ಆಸ್ತಕರು ನೋಂದಣಿ ಮಾಡಿಕೊಳ್ಳಿ:
ಪಾಲಿಕೆ ವ್ಯಾಪ್ತಿಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಶೈಕ್ಷಣಿಕ ಸಂಸ್ಥೆಗಳು, ಲೇಕ್ ಗ್ರೂಪ್ಸ್, ಸಾರ್ವಜನಿಕರು ಸೇರಿದಂತೆ ಇನ್ನಿತರರು https://bit.ly/friendsofcac ನಲ್ಲಿ ನೋಂದಣಿ ಮಾಡಿಕೊಳ್ಳಿ
ಆಸಕ್ತರು ಆರ್.ಎಫ್.ಒಗಳನ್ನು ಸಂಪರ್ಕಿಸಿ:
ಪಾಲಿಕೆ ವ್ಯಾಪ್ತಿಯ 5 ವಲಯಳಗಳಲ್ಲಿ ಸಸಿಗಳನ್ನು ನಡೆಲು ಯೋಜನೆ ರೂಪಿಸಿದ್ದು, ಆಸಕ್ತರು ವಲಯ ಅರಣ್ಯ ಅಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ. *ಅಧಿಕಾರಿಗಳ ವಿವರ ಈ ಕೆಳಕಂಡಂತಿದೆ.*
ವಲಯ – ಆರ್‌ಎಫ್‌ಒ ಹೆಸರು – ಮೊ.ಸಂ
*ಯಲಹಂಕ:* ಮಹೇಶ್(ಆರ್‌ಎಫ್‌ಒ), 7019196107
*ಮಹದೇವಪುರ:* ಪುಷ್ಪಾ(ಆರ್‌ಎಫ್‌ಒ), 9480685541
*ಬೊಮ್ಮನಹಳ್ಳಿ:* ನರೇಂದ್ರ ಬಾಬು(ಆರ್‌ಎಫ್‌ಒ), 9480685399
*ಆರ್.ಆರ್ ನಗರ:* ಕೃಷ್ಣಾ(ಆರ್‌ಎಫ್‌ಒ), 776055345
*ದಾಸರಹಳ್ಳಿ:* ರಾಜಪ್ಪ(ಆರ್‌ಎಫ್‌ಒ), 9448234928
ವಲಯವಾರು ಸಸಿಗಳನ್ನು ನೆಡುವ ವಿವರ:
*ವಲಯ – ಸಸಿಗಳ ಸಂಖ್ಯೆ*
ಯಲಹಂಕ – 5450
ಮಹದೇವಪುರ – 4800
ಬೊಮ್ಮನಹಳ್ಳಿ – 4000
ಆರ್.ಆರ್ ನಗರ – 1600
ದಾಸರಹಳ್ಳಿ ವಲಯ – 4000