ಬೆಂಗಳೂರು, ಆಗಸ್ಟ್ 31
ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರವು ವಾರಾಂತ್ಯದಲ್ಲಿ ವಿದೇಶಿ ಭಾಷೆಗಳ ಕಲಿಕೆಗೆ ಅವಕಾಶ ಕಲ್ಪಿಸುತ್ತಿದೆ.
ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಜಪಾನೀಸ್, ಕೊರಿಯನ್, ಚೈನೀನ್, ಇಟಾಲಿಯನ್, ಪೋರ್ಚುಗೀಸ್ ಭಾಷೆ ತರಗತಿಗಳು ಆರಂಭವಾಗುತ್ತಿದ್ದು, ದ್ವಿತೀಯ ಪಿಯುಸಿ ಅಥವಾ ಸಮಾನಂತರ ಶಿಕ್ಷಣದಲ್ಲಿ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದು. ಉನ್ನತ ಶಿಕ್ಷಣ ಇಲಾಖೆಯ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಅಡಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು. ಪ್ರತಿಯೊಂದು ಭಾಷೆ ಕೋರ್ಸಿಗೆ 1 ವರ್ಷದ ಸರ್ಟಿಫಿಕೇಟ್ ಕೋರ್ಸು, 1 ವರ್ಷದ ಯುಜಿ ಡಿಪ್ಲೊಮಾ ಕೋರ್ಸ್ ಹಾಗೂ 1 ವರ್ಷದ ಪಿಜಿ ಡಿಪ್ಲೊಮಾ ಕೋರ್ಸ್ ವ್ಯಾಸಂಗದ ಆಧಾರದಲ್ಲಿ ಸರ್ಟಿಫಿಕೇಟ್ ನೀಡಲಾಗುತ್ತದೆ.
ಆಸಕ್ತರು ದೂರವಾಣಿ ಸಂಖ್ಯೆ 080-29572019/9353251761ಗೆ ಕರೆ ಮಾಡಬಹುದು. ಅಥವಾ ವಿವಿಯ ಜಾಲತಾಣ www.bcu.ac.in ಗೆ ಭೇಟಿ ನೀಡಿ ಪಡೆಯಬಹುದು ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.